ದೊಡ್ಡಬಳ್ಳಾಪುರ: ವಿವೇಕ್ ಸುಬ್ಬಾರೆಡ್ಡಿ ಗೆಲುವಿಗೆ ಸಿಹಿ ಹಂಚಿ ಸಂಭ್ರಮಿಸಿದ ವಕೀಲರು
ದೊಡ್ಡಬಳ್ಳಾಪುರ, ಫೆ.18- ತೀವ್ರ ಕುತೂಹಲ ಕೆರಳಿಸಿದ್ದ ಬೆಂಗಳೂರು ವಕೀಲರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ರಾಗಿ ಹೈಕೋರ್ಟ್ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ಅವರು ಪುನರಾಯ್ಕೆಯಾಗಿದ್ದಾರೆ.
ಭಾನುವಾರ ನಡೆದ ಚುನಾವಣೆಯಲ್ಲಿ ವಿವೇಕ್ ರೆಡಿ ಅವರು ಎರಡನೇ ಬಾರಿಗೆ ಅಧ್ಯಕ್ಷರಾಗಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಹೈಕೋರ್ಟ್ ವಕೀಲ ಎಚ್.ವಿ. ಪ್ರವೀಣ್ ಗೌಡ ಆಯ್ಕೆಯಾಗಿದ್ದಾರೆ.
ಬೆಂಗಳೂರು ವಕೀಲರ ಸಂಘಕ್ಕೆ 2025-28ರ ಅವಧಿಗೆ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ 6,820 ಮತಗಳನ್ನು ಪಡೆದು, 2,302 ಮತಗಳ ಅಂತರದ ಗೆಲುವು ದಾಖಲಿಸಿದ್ದರಿಂದ,ದೊಡ್ಡಬಳ್ಳಾಪುರದ ನ್ಯಾಯಾಲಯದ ಆವರಣದಲ್ಲಿ ವಕೀಲರು ( VSR ಬಣ ) ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ಈ ವೇಳೆ VSR ಟೀಂ ನ ವಕೀಲರಾದ ರವಿಕುಮಾರ್.ಜಿ.ಟಿ., ಎಂ.ವಿ. ಮುರಳಿಧರ್, ಕನಕರಾಜು, ಬಿ.ಎನ್., ನಾಗರಾಜ್ ಗೌಡ, ಮುನಿರಾಜು, ಡಿ.ಕೆ. ಲಕ್ಷ್ಮಿನಾರಾಯಣ, ರಾಜು ಚೌಡಪ್ಪ, ಎಲೆ ಪೇಟೆ ಮುನಿರಾಜು, ಕಾಂತರಾಜು, ಕೆ. ಜಗನ್ನಾಥ, ತೇಜಸ್ ಮತ್ತಿತರರಿದ್ದರು.
Comments
Post a Comment