ದೊಡ್ಡಬಳ್ಳಾಪುರ: ರೈಲಿಗೆ ಸಿಲುಕಿ ಕಾಲು ಕಳೆದುಕೊಂಡ ಯುವಕ.‌.!

 ದೊಡ್ಡಬಳ್ಳಾಪುರ,ಫೆ.17- ಹಳಿ ದಾಟುವ ವೇಳೆ ರೈಲಿನ ಚಕ್ರಕ್ಕೆ ಕಾಲು ಸಿಲುಕಿ, ಯುವಕನ ಪಾದ ತುಂಡಾಗಿರುವ ಘಟನೆ ನಗರದ ರೈಲ್ವೆ ಸ್ಟೇಷನ್‌ನಲ್ಲಿ ಶನಿವಾರ ರಾತ್ರಿ ನಡೆದಿದೆ.

ದೊಡ್ಡಬಳ್ಳಾಪುರದ ದರ್ಗಾಜೋಗಿಹಳ್ಳಿ ನಿವಾಸಿ ಹೇಮಂತ್ ಕುಮಾರ್ ಕಾಲು ಕಳೆದುಕೊಂಡ ದುರ್ದೈವಿ ಯುವಕ.

ಶನಿವಾರ ರಾತ್ರಿ ಸುಮಾರು 2.30ರ ವೇಳೆಗೆ ಘಟನೆ ನಡೆದಿದ್ದು, ಗಾಯಗೊಂಡ ಯುವಕನನ್ನ ನಗರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ.

 ಶನಿವಾರ ರಾತ್ರಿ ಹಳಿ ದಾಟುವ ಸಂದರ್ಭದಲ್ಲಿ ಅಡ್ಡವಿದ್ದ ಗೂಡ್ಸ್ ರೈಲು ದಾಟುವ ಸಂದರ್ಭದಲ್ಲಿ ಏಕಾಏಕಿ ರೈಲು ಚಲಿಸಿದೆ,ಈ ವೇಳೆ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಹೇಮಂತ್ ಕುಮಾರ್ ಕಾಲು ರೈಲಿನ ಚಕ್ರಕ್ಕೆ ಸಿಲುಕಿ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೂಡಲೇ ರೈಲ್ವೆ ಸಿಬ್ಬಂದಿ ಹಾಗೂ ರೈಲ್ವೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಗಾಯಾಳುವನ್ನ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಈ ಕುರಿತು ಎನ್ ಸಿ ಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.

Comments

Popular posts from this blog

ದೊಡ್ಡಬಳ್ಳಾಪುರ: ತಹಸೀಲ್ದಾರ್ ಸಹಿ ನಕಲು ಪ್ರಕರಣದ ಸುತ್ತ ಹಲವು ಅನುಮಾನಗಳು..!

ದೊಡ್ಡಬಳ್ಳಾಪುರ: ತಹಶಿಲ್ದಾರ್ ನಕಲಿ ಸಹಿ ಬಳಸಿ ಲಕ್ಷಾಂತರ ರೂ ಗುಳುಂ..!