Posts

ದೊಡ್ಡಬಳ್ಳಾಪುರ: ವಿವೇಕ್ ಸುಬ್ಬಾರೆಡ್ಡಿ ಗೆಲುವಿಗೆ ಸಿಹಿ ಹಂಚಿ ಸಂಭ್ರಮಿಸಿದ ವಕೀಲರು

 ದೊಡ್ಡಬಳ್ಳಾಪುರ, ಫೆ.18- ತೀವ್ರ ಕುತೂಹಲ ಕೆರಳಿಸಿದ್ದ ಬೆಂಗಳೂರು ವಕೀಲರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ರಾಗಿ ಹೈಕೋರ್ಟ್ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ಅವರು ಪುನರಾಯ್ಕೆಯಾಗಿದ್ದಾರೆ.  ಭಾನುವಾರ ನಡೆದ ಚುನಾವಣೆಯಲ್ಲಿ  ವಿವೇಕ್ ರೆಡಿ ಅವರು ಎರಡನೇ ಬಾರಿಗೆ ಅಧ್ಯಕ್ಷರಾಗಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಹೈಕೋರ್ಟ್ ವಕೀಲ ಎಚ್.ವಿ. ಪ್ರವೀಣ್ ಗೌಡ ಆಯ್ಕೆಯಾಗಿದ್ದಾರೆ.  ಬೆಂಗಳೂರು ವಕೀಲರ ಸಂಘಕ್ಕೆ 2025-28ರ ಅವಧಿಗೆ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ 6,820 ಮತಗಳನ್ನು ಪಡೆದು, 2,302 ಮತಗಳ ಅಂತರದ  ಗೆಲುವು ದಾಖಲಿಸಿದ್ದರಿಂದ,ದೊಡ್ಡಬಳ್ಳಾಪುರದ  ನ್ಯಾಯಾಲಯದ ಆವರಣದಲ್ಲಿ  ವಕೀಲರು ( VSR ಬಣ ) ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು‌‌. ಈ ವೇಳೆ VSR ಟೀಂ ನ  ವಕೀಲರಾದ ರವಿಕುಮಾರ್.ಜಿ.ಟಿ., ಎಂ.ವಿ. ಮುರಳಿಧರ್, ಕನಕರಾಜು, ಬಿ.ಎನ್., ನಾಗರಾಜ್ ಗೌಡ, ಮುನಿರಾಜು, ಡಿ.ಕೆ. ಲಕ್ಷ್ಮಿನಾರಾಯಣ, ರಾಜು ಚೌಡಪ್ಪ, ಎಲೆ ಪೇಟೆ ಮುನಿರಾಜು, ಕಾಂತರಾಜು, ಕೆ. ಜಗನ್ನಾಥ, ತೇಜಸ್ ಮತ್ತಿತರರಿದ್ದರು.

ದೊಡ್ಡಬಳ್ಳಾಪುರ: ತಹಸೀಲ್ದಾರ್ ಸಹಿ ನಕಲು ಪ್ರಕರಣದ ಸುತ್ತ ಹಲವು ಅನುಮಾನಗಳು..!

 Quick news Kannada: ದೊಡ್ಡಬಳ್ಳಾಪುರ,ಫೆ.18- ತಾಲ್ಲೂಕು ಕಚೇರಿಯಲ್ಲಿನ ಮುಜರಾಯಿ ಇಲಾಖೆಗೆ ಸಂಭಂದಿಸಿದ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ತಹಸೀಲ್ದಾರ್ ಅವರ ಸಹಿ ನಕಲು ಮಾಡಿ ಹಣ ದುರುಪಯೋಗದ  ಆರೋಪದ ಮೇಲೆ ಸಾಸಲು ಹೋಬಳಿ ಕಂದಾಯ ನಿರೀಕ್ಷಕ ಹೇಮಂತ್ ಕುಮಾರ್ ಎಂಬಾತನನ್ನು ನಗರ ಪೊಲೀಸರು ಬಂಧಿಸಿದ್ದಾರೆ.    RTI ಕಾರ್ಯಕರ್ತರೊಬ್ಬರು ಮಧುರೆ ಹೋಬಳಿಯ ಗ್ರಾಮವೊಂದರ ಬಸವಣ್ಣನ ದೇವಸ್ಥಾನ ರಿಪೇರಿಗೆ ಆರಾಧನ ಸ್ಕೀಂ ನಡಿ ಅನುದಾನ ನೀಡುವಂತೆ ಅರ್ಜಿ ಸಲ್ಲಿಸಿದ್ದು,ಹಣ ಬಿಡುಗಡೆಗೆ ಲಂಚ ಕೇಳಿದಾಗ  ಅವರು ಲಕ್ಷ ಲಕ್ಷ ಹಣ ಡ್ರಾ ಆಗಿದೆ ನಮಗೆ ಮಾತ್ರ ಅನುದಾನ ಬಿಡುಗಡೆ ಮಾಡುತ್ತಿಲ್ಲ ಯಾಕೆ ಎಂದು ಕೇಳಿ,  ಸಂಗ್ರಹಿಸಿದ್ದ ದಾಖಲೆಗಳನ್ನ ಮುಂದಿಟ್ಟಿದ್ದಾರೆ ಎನ್ನಲಾಗಿದ್ದು, ಆಗ ತಕ್ಷಣ ಎಚ್ಚೆತ್ತ ತಹಶೀಲ್ದಾರ್ ವಿಭಾ ವಿದ್ಯಾರಾಥೋಡ್ ಅವರು  ,ಹೇಮಂತ್ ಕುಮಾರ್ ನನ್ನ ಕರೆದು  ವಿಚಾರಣೆ ನಂತರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.   ದೂರನ್ನು ಆಧರಿಸಿ ತನಿಖೆ ಕೈಗೊಂಡ ಇನ್ಸ್ಪೆಕ್ಟರ್ ಅಮರೇಶ್ ಗೌಡ, ಬೆಂಗಳೂರಿನ ಮಹಾಲಕ್ಷ್ಮೀಪುರದ ಕೆನರಾ ಬ್ಯಾಂಕ್ ಕುರುಬರಹಳ್ಳಿ ಶಾಖೆಯಲ್ಲಿನ ಸುಶೀಲಮ್ಮ ಎಂಬುವವರ ಖಾತೆಗೆ ಹಣ ಜಮಾ ಆಗಿರುವ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ.  ಬ್ಯಾಂಕ್ ಸಿಬ್ಬಂದಿಗೆ ಅನುಮಾನ ಬಾರಲಿಲ್ಲವೇಕೆ?:   ಮುಜರಾಯಿ ಇಲಾಖೆಯ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ತಹಶೀಲ್ದಾರ...

ದೊಡ್ಡಬಳ್ಳಾಪುರ: ರೈಲಿಗೆ ಸಿಲುಕಿ ಕಾಲು ಕಳೆದುಕೊಂಡ ಯುವಕ.‌.!

 ದೊಡ್ಡಬಳ್ಳಾಪುರ,ಫೆ.17- ಹಳಿ ದಾಟುವ ವೇಳೆ ರೈಲಿನ ಚಕ್ರಕ್ಕೆ ಕಾಲು ಸಿಲುಕಿ, ಯುವಕನ ಪಾದ ತುಂಡಾಗಿರುವ ಘಟನೆ ನಗರದ ರೈಲ್ವೆ ಸ್ಟೇಷನ್‌ನಲ್ಲಿ ಶನಿವಾರ ರಾತ್ರಿ ನಡೆದಿದೆ. ದೊಡ್ಡಬಳ್ಳಾಪುರದ ದರ್ಗಾಜೋಗಿಹಳ್ಳಿ ನಿವಾಸಿ ಹೇಮಂತ್ ಕುಮಾರ್ ಕಾಲು ಕಳೆದುಕೊಂಡ ದುರ್ದೈವಿ ಯುವಕ. ಶನಿವಾರ ರಾತ್ರಿ ಸುಮಾರು 2.30ರ ವೇಳೆಗೆ ಘಟನೆ ನಡೆದಿದ್ದು, ಗಾಯಗೊಂಡ ಯುವಕನನ್ನ ನಗರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ.  ಶನಿವಾರ ರಾತ್ರಿ ಹಳಿ ದಾಟುವ ಸಂದರ್ಭದಲ್ಲಿ ಅಡ್ಡವಿದ್ದ ಗೂಡ್ಸ್ ರೈಲು ದಾಟುವ ಸಂದರ್ಭದಲ್ಲಿ ಏಕಾಏಕಿ ರೈಲು ಚಲಿಸಿದೆ,ಈ ವೇಳೆ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಹೇಮಂತ್ ಕುಮಾರ್ ಕಾಲು ರೈಲಿನ ಚಕ್ರಕ್ಕೆ ಸಿಲುಕಿ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೂಡಲೇ ರೈಲ್ವೆ ಸಿಬ್ಬಂದಿ ಹಾಗೂ ರೈಲ್ವೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಗಾಯಾಳುವನ್ನ ಆಸ್ಪತ್ರೆಗೆ ಕಳುಹಿಸಿದ್ದಾರೆ. ಈ ಕುರಿತು ಎನ್ ಸಿ ಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.

ದೊಡ್ಡಬಳ್ಳಾಪುರ: ತಹಶಿಲ್ದಾರ್ ನಕಲಿ ಸಹಿ ಬಳಸಿ ಲಕ್ಷಾಂತರ ರೂ ಗುಳುಂ..!

 ದೊಡ್ಡಬಳ್ಳಾಪುರ,ಫೆ.14-ತಹಶಿಲ್ದಾರ್ ವಿಭಾ ವಿದ್ಯಾ ರಾಥೋಡ್ ಹೆಸರಿನ ನಕಲಿ ಸಹಿ ಬಳಸಿ ಮುಜರಾಯಿ ಇಲಾಖೆಯ ಸುಮಾರು 59 ಲಕ್ಷರೂ ಲಪಟಾಯಿಸಿರುವ ಆರೋಪದ ಮೇಲೆ ಕಂದಾಯ ನಿರೀಕ್ಷಕ (RI) ಹೇಮಂತ್ ಕುಮಾರ್ ಅವರನ್ನು ಬಂಧಿಸಲಾಗಿದೆ. ದೊಡ್ಡಬಳ್ಳಾಪುರ ನಗರ ಠಾಣೆ ಇನ್ಸ್ಪೆಕ್ಟರ್ ಅಮರೇಶ್ ಗೌಡ ನೇತೃತ್ವದ ಪೊಲೀಸರು ಆರೋಪಿ ಹೇಮಂತ್ ಕುಮಾರ್ ಅವರನ್ನು ಬಂಧಿಸಿ, ನ್ಯಾಯಾಲಯದ ಅನುಮತಿ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ. ಮುಜರಾಯಿ ಇಲಾಖೆ ಎಫ್‌ಡಿಎ ಕರ್ತವ್ಯದಿಂದ ಸಾಸಲು ಹೋಬಳಿ ಆರ್ ಐ ಆಗಿ ವರ್ಗಾವಣೆ ಆದ ಬಳಿಕ ಹೇಮಂತ್ ಕುಮಾರ್ ಅವರು ದಾಖಲೆಗಳನ್ನು ನೀಡುವ ವೇಳೆ ಚೆಕ್ ಬುಕ್ ಗಳನ್ನು ನೀಡದೆ ಉಳಿಸಿಕೊಂಡಿದ್ದಾರೆ ಎನ್ನಲಾಗಿದೆ. ಬಳಿಕ ಹಲವು ಕಂತುಗಳಲ್ಲಿ ತಹಶಿಲ್ದಾರ್ ವಿಭಾ ವಿದ್ಯಾ ರಾಥೋಡ್ ಅವರ ನಕಲಿ ಸಹಿ ಬಳಸಿ ಸುಮಾರು 59 ಲಕ್ಷ ರೂಪಗಳನ್ನು ವಿವಿಧ ಖಾತೆಗಳಿಗೆ ವರ್ಗಾವಣೆ ನಡೆಸಲಾಗಿದೆ. ಇತ್ತೀಚೆಗೆ ದಾಖಲೆ ಪರಿಶೀಲನೆ ವೇಳೆ ಖಾತೆಯಲ್ಲಿ ಒಂದು ರೂ ಮಾತ್ರ ಉಳಿದ್ದು, ತನಿಖೆ ನಡೆಸಿದಾಗ ಈ ಕೃತ್ಯ ಬಯಲಾಗಿದೆ.  ದೂರಿನ ಅನ್ವಯ ಹೇಮಂತ್ ಕುಮಾರ್ ಅವರನ್ನು ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.